Admin Jan 12, 2018

ಮೂಲ್ಕಿಯ ಕೆಎಸ್​ರಾವ್ ನಗರದ ದ.ಕ. ಜಿ.ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳ ಶಿಲಾನ್ಯಾಸ ಸೇರಿದಂತೆ ಒಟ್ಟು ಸುಮಾರು 61 ಲಕ್ಷದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನಾ ಸಮಾರಂಭವು ಜನವರಿ 13ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಕೆ ಎಸ್ ರಾವ್ ನಗರದ ದ.ಕ.ಜಿ.ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣದಲ್ಲಿ ನಡೆಯಲಿದೆಯೆಂದು ಶಾಲೆಯ ಅಭಿವೃದ್ದಿ ಸಮಿತಿಯ ಸದಸ್ಯ ಬಿಎಂ ಆಸೀಫ್ ತಿಳಿಸಿದರು.
ಮುಲ್ಕಿಯಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ಶಾಸಕ ಕೆ.ಅಭಯಚಂದ್ರ ಜ್ಯೆನ್ ರವರು ಶಿಕ್ಷಣ ಇಲಾಖೆಯ ನಿಧಿಯಲ್ಲಿ ೨೫ ಲಕ್ಷ ಅನುದಾನದಲ್ಲಿ ಮಂಜೂರಾದ ಶಾಲಾ ನೂತನ ಕೊಠಡಿಯ ಶಿಲಾನ್ಯಾಸ ನೆರವೇರಿಸಲಿದ್ದು ರಾಜ್ಯ ಸರ್ಕಾರದ ವಿಶೇಷ ನಿಧಿಯಿಂದ 20 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಶಾಲಾ ಮೈದಾನದ ತಡೆಗೋಡೆ ನಿರ್ಮಾಣ , ಮೂಲ್ಕಿ ನಗರ ಪಂಚಾಯತ್ ನಗರೋಥ್ಥಾನ ನಿಧಿಯಿಂದ 9 ಲಕ್ಷ ವೆಚ್ಚದಲ್ಲಿ ವಿಸ್ತರಣೆಗೊಂಡ ಶಾಲಾ ಮೈದಾನ, ಶಾಸಕರ ಅನುದಾನದಲ್ಲಿ 2 ಲಕ್ಷ ವೆಚ್ಚದಲ್ಲಿ ದುರಸ್ತಿಗೊಂಡ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ದುರಸ್ತಿ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ ಎಂದರು.

ಕಾರ್ನಾಡು ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಜಯ ಶೆಟ್ಟಿಯವರು ಮಾತನಾಡಿ ಮೂಲ್ಕಿಯ ಕೊಲ್ನಾಡು ಕ್ಯೆಗಾರಿಕಾ ಪ್ರದೇಶ ಹಾಗೂ ಮೂಲ್ಕಿಯ ಕೆ ಎಸ್ ರಾವ್ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಮತ್ತು ಒಳ ರಸ್ತೆ ಸೇರಿದಂತೆ 1.136 ಕಿ.ಮಿ ರಸ್ತೆಗೆ ಶಾಸಕ ಕೆ.ಅಭಯಚಂದ್ರ ಜೈನ್ ರವರ ಶಿಪಾರಸ್ಸಿನ ಮೇರೆಗೆ 2.9 ಕೋಟಿ ಅನುದಾನವು ರಾಜ್ಯ ಸರ್ಕಾರದ ಕ್ಯೆಗಾರಿಕಾ ಇಲಾಖೆಯಿಂದ ಮಂಜೂರಾಗಿದ್ದು, ಸಂಪೂರ್ಣ ಕಾಂಕ್ರೀಟಿಕರಣ ರಸ್ತೆಯ ಕಾಮಗಾರಿಯ ಶಿಲಾನ್ಯಾಸವನ್ನು ಶಾಸಕ ಕೆ ಅಭಯಚಂದ್ರರು ನೆರವೇರಿಸಲಿದ್ದಾರೆಂದು ಎಂದರು.

ರಾಷ್ಟ್ರೀಯ ಹೆದ್ದಾರಿಯಿಂದ ಕೊಲ್ನಾಡು ಕ್ಯೆಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯು ಮೂಲ್ಕಿಯ ಕೆ ಎಸ್ ರಾವ್ ನಗರಕ್ಕೆ ಸಂಪರ್ಕವನ್ನು ಹೊಂದಿದ್ದು, ಕಳೆದ ಹಲವಾರು ವರ್ಷಗಳಿಂದ ರಸ್ತೆಯಲ್ಲಿ ಹೊಂಡಗಳು ತುಂಬಿ ವಾಹನ ಸಂಚಾರ ಅಸಾಧ್ಯವಾಗಿದ್ದು ಶಾಸಕರ ಮುತುವರ್ಜಿಯಿಂದ ರಸ್ತೆಯ ಅಭಿವೃದ್ದಿ ಕಾಮಗಾರಿಗೆ 2.9ಕೋಟಿ ಮಂಜೂರಾಗಿದ್ದು, ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚಿನ ಸೈಟ್ ಗಳು ಖಾಲಿಯಿದ್ದು ಇದನ್ನು ಅರ್ಹರಿಗೆ ನೀಡಿದ್ದಲ್ಲಿ ಕ್ಯೆಗಾರಿಕಾ ಪ್ರದೇಶ ಬೆಳೆಯಲು ಸಾಧ್ಯವಿದೆಎಂದರು. ನಂತರ ಮಾತನಾಡಿದ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಂಜಯ ಮಟ್ಟು ಲೋಕೋಪಯೋಗಿ ಇಲಾಖೆಯಿಂದ ಕೆ ಎಸ್ ರಾವ್ ನಗರದ ಸರ್ಕಾರಿ ಶಾಲೆಯ ಕಟ್ಟಡ ದುರಸ್ತಿಗೆ 8.5 ಲಕ್ಷ ಮಂಜೂರಾಗಿದ್ದು ಕೊಲ್ನಾಡು ಕ್ಯೆಗಾರಿಕಾ ಪ್ರದೇಶದ ಅಭಿವೃದ್ಧಿಗೆ ಶಾಸಕರು ಹೆಚ್ಚಿನ ಒತ್ತು ನೀಡುತ್ತಿದ್ದಾರೆಂದು ತಿಳಿಸಿದರು. ಈ ಸಂದರ್ಭ ಕೊಲ್ನಾಡು ಕ್ಯೆಗಾರಿಕಾ ಸಂಘದ ಕಾರ್ಯದರ್ಶಿ ಪ್ರಶಾಂತ್, ಮೂಲ್ಕಿ ನಗರ ಪಂಚಾಯತ್ ಸದಸ್ಯರಾದ ಪುತ್ತುಬಾಬ, ಡಾ ಹರಿಪ್ರಸಾದ್ ಶೆಟ್ಟಿ, ಕ್ಯೆಗಾರಿಕಾ ಪ್ರದೇಶದ ಉದ್ಯಮಿ ಎ ಎಚ್ ಶಮೀರ್, ನವೀನ್ ಪುತ್ರನ್ ಇದ್ದರು.

Leave a comment.

Your email address will not be published. Required fields are marked*