Admin Jan 12, 2018

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಜಾಗತಿಕ ಮಟ್ಟದಲ್ಲಿ ವಿಶ್ವ ನಾಯಕರ ಜನಪ್ರಿಯತೆಯ ರೇಟಿಂಗ್ಸ್‌ನಲ್ಲಿ 3 ನೇ ಸ್ಥಾನವನ್ನು ಪಡೆದುಕೊಂಡಿದ್ದು, ಅಮೆರಿಕಾ, ರಷ್ಯಾ, ಚೀನಾಗಳ ನಾಯಕರನ್ನು ಹಿಂದಿಕ್ಕಿದ್ದಾರೆ.

ಪ್ರತಿಷ್ಠಿತ ಗಲ್ಲಪ್ ಇಂಟರ್‌ನ್ಯಾಷನಲ್‌ನ ವಾರ್ಷಿಕ ಸಮೀಕ್ಷೆ ‘ಒಪಿನಿಯನ್ ಆಫ್ ಗ್ಲೋಬಲ್ ಲೀಡರ‍್ಸ್’ನಲ್ಲಿ ಜಾಗತಿಕ ಮಟ್ಟದಲ್ಲಿ ಮೂರನೇ ಅತೀ ಜನಪ್ರಿಯ ನಾಯಕನಾಗಿ ಹೊರಹೊಮ್ಮಿದ್ದಾರೆ.

ಜರ್ಮನ್ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಮತ್ತು ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯುವೆಲ್ ಮಕ್ರೋನ್ ಬಳಿಕದ ಸ್ಥಾನ ಪ್ರಧಾನಿ ಮೋದಿಗೆ ದೊರೆತಿದೆ. ಬ್ರಿಟಿಷ್ ಪ್ರಧಾನಿ ಥೆರೇಸಾ ಮೇ ಅವರಿಗೆ ೪ನೇ ಸ್ಥಾನ, ಚೀನಾದ ಕ್ಸಿ ಜಿನ್‌ಪಿಂಗ್ ಅವರಿಗೆ ೫ನೇ ಸ್ಥಾನ ದೊರೆತಿದೆ.

 

Leave a comment.

Your email address will not be published. Required fields are marked*