Admin Jan 12, 2018

ನವದೆಹಲಿ: ಈ ಗಣರಾಜ್ಯೋತ್ಸವದ ಮಹಿಳಾ ಸೈನಿಕರ ಸಾಹಸ ಪ್ರದರ್ಶನಕ್ಕೆ ವೇದಿಕೆಯಾಗಲಿದೆ. ಬಿಎಸ್‌ಎಫ್‌ನ ಮಹಿಳಾ ಬೈಕರ್ ಪಡೆ ಜ.26ರಂದು ರಾಜಪಥದಲ್ಲಿ ತನ್ನ ಸಾಹಸ ಪ್ರದರ್ಶಿಸಲಿದೆ.

27 ಮಹಿಳೆಯರ ತಂಡ ತಮ್ಮ 350ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಮೋಟಾರ್‌ಸೈಕಲ್ ಮೂಲಕ ವಿವಿಧ ಸ್ಟಂಟ್‌ಗಳನ್ನು ಪ್ರದರ್ಶಿಸಲಿದೆ.

2015ರಲ್ಲಿ ಸೇನೆ, ನೌಕೆ ಮತ್ತು ವಾಯುಪಡೆಯ ಮಹಿಳಾ ಪಡೆ ನ್ಯಾಷನಲ್ ಪರೇಡ್‌ನಲ್ಲಿ ಮೊದಲಬಾರಿಗೆ ಭಾಗವಹಿಸಿದವು. ಇದೀಗ ದೇಶದ ಅತೀದೊಡ್ಡ ಗಡಿ ರಕ್ಷಣಾ ಪಡೆ ಬಿಎಸ್‌ಎಫ್ ಕಳೆದ ವರ್ಷ ಮಹಿಳಾ ಬೈಕರ್ ಪಡೆಯನ್ನು ರಚಿಸಿದ್ದು ಈ ಬಾರಿ ಅವರೂ ರಾಜಪಥದಲ್ಲಿ ಸಾಹಸ ತೋರಿಸಲಿದ್ದಾರೆ.

Leave a comment.

Your email address will not be published. Required fields are marked*