Admin Jan 12, 2018

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) 30 ಇತರ ಸೆಟ್‌ಲೈಟ್‌ಗಳೊಂದಿಗೆ ಇಂದು ತನ್ನ ಮಹತ್ವದ 100ನೇ ಸೆಟ್‌ಲೈಟ್‌ನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದೆ. ಇದಕ್ಕಾಗಿ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.

ಇದು 2018ರ ಇಸ್ರೋದ ಮೊದಲ ಉಡಾವಣೆಯಾಗಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್‌ನಿಂದ ಯಶಸ್ವಿಯಾಗಿ ಗುರಿಯನ್ನು ತಲುಪಿದೆ.

ಪಿಎಸ್‌ಎಲ್‌ವಿ-ಸಿ40 ರಾಕೆಟ್ ಮೂಲಕ ಒಟ್ಟು 1323ಕೆಜಿ ತೂಕದ 31ಸೆಟ್‌ಲೈಟ್‌ಗಳನ್ನು ಉಡಾವಣೆಗೊಳಿಸಲಾಯಿತು. ಇದರಲ್ಲಿ ಮೂರು ಮೈಕ್ರೋಸೆಟ್‌ಲೈಟ್ ಮತ್ತು ಕೆನಡಾ, ಫಿನ್‌ಲ್ಯಾಂಡ್, ಫ್ರಾನ್ಸ್, ಕೊರಿಯಾ, ಯುಕೆ ಮತ್ತು ಯುಎಸ್ ದೇಶಗಳ 25 ನ್ಯಾನೋಸೆಟ್‌ಲೈಟ್‌ಗಳಾಗಿವೆ.

ಇಸ್ರೋ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆಗಳನ್ನು ಸಲ್ಲಿಸಿದ್ದು, ‘ಇಸ್ರೋ ಉಡಾವಣೆಗೊಳಿಸಿದ 100ನೇ ಸೆಟ್‌ಲೈಟ್ ಅದರ ಐತಿಹಾಸಿಕ ಸಾಧನೆಯ ಸಂಕೇತವಾಗಿದೆ, ಅಲ್ಲದೇ ಭಾರತದ ಬಾಹ್ಯಾಕಾಶ ಕಾರ್ಯಕ್ರಮವನ್ನು ಭವಿಷ್ಯದಲ್ಲಿ ಉಜ್ವಲಗೊಳಿಸಲಿದೆ’ ಎಂದಿದ್ದಾರೆ.

Leave a comment.

Your email address will not be published. Required fields are marked*