Admin Jan 12, 2018

ಕಾರ್ಕಳ: ಕಾರ್ಕಳದ ವಕೀಲರ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿಯವರ ಮೇಲೆ ತಲವಾರ್‌ನಿಂದ ಹಲ್ಲೆ ನಡೆಸಿದ್ದು, ಘಟನೆ ಖಂಡಿಸಿ ಕಾರ್ಕಳದ ವಕೀಲರ ಸಂಘದಿಂದ ಕೆಂಪು ಪಟ್ಟಿ ಧರಿಸಿ ಕೋರ್ಟ್ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನ್ಯಾಯಾಲಯದ ಆದೇಶವನ್ನು ಪಾಲಿಸಲು ಹೋದಂತಹ ಮೂಡುಬಿದಿರೆಯ ಕೋರ್ಟ್ ಕಮಿಷನರ್ ವಿಶಾಲ್ ಕುಮಾರ್‌ರವರು ಮತ್ತು ಬಾಲಕೃಷ್ಣ ಶೆಟ್ಟಿ ಕೋರ್ಟ್ ಆದೇಶದಂತೆ ಸ್ಥಳ ತನಿಖೆ ನಡೆಸುತ್ತಿದ್ದಾಗ ಶಶಿಕಾಂತ್ ಶೆಟ್ಟಿಗಾರ್ ಮತ್ತು ಇತರರು ಮೂರು ಮಂದಿ ಏಕಾ‌ಏಕಿ ತಳವಾರ್ ನಿಂದ ವಕೀಲರ ಮೇಲೆ ಹಲ್ಲೆ ಮಾಡಿದ್ದಾರೆ.
ಪ್ರತಿಭಟನೆಯನ್ನು ಉದ್ದೇಶಿಸಿ ಹಿರಿಯ ನ್ಯಾಯವಾದಿ ಎಮ್.ಟಿ ವಿಜಯ ಕುಮಾರ್ ಮಾತನಾಡಿ, ಈ ಘಟನೆ ಅಪರೂಪದಲ್ಲಿ ಒಂದು ಅಪರೂಪವಾದದ್ದು. ನನ್ನ 50 ವರ್ಷ ವೃತ್ತಿ ಜೀವನದಲ್ಲಿ ಇಂತದ್ದು ಮೊದಲ ಘಟನೆ. ನಮಗೆ ಭದ್ರತೆ ಇಲ್ಲದಂತಾಗಿದೆ ಎಂದು ಹೇಳಿದರು.

Leave a comment.

Your email address will not be published. Required fields are marked*