Admin Jan 12, 2018

ಕಟೀಲು: ಗ್ರಾಮೀಣ ಪ್ರದೇಶದ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯಬೇಕು. ಎಪಿಎಂಸಿಯ ಅನುದಾನದಿಂದ ಕಟೀಲು ಮಾಂಜದಲ್ಲಿ 35 ಲಕ್ಷ.ರೂ ವೆಚ್ಚದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣವಾಗಲಿದೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.
ಗುರುವಾರ ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಗೆಯಂಗಡಿ ಮಾಂಜದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಎಪಿಎಂಸಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಕಟೀಲು ಪರಿಸರದ ರೈತಾಪಿ ವರ್ಗದವರು ಕಿನ್ನಿಗೋಳಿ ಅಥವ ಬಜಪೆ ಕೃಷಿ ಮಾರುಕಟ್ಟೆಗಳನ್ನು ಅವಲಂಬಿಸಬೇಕಾಗಿದೆ. ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಇಲ್ಲಿ ಮಾರುಕಟ್ಟೆ ನಿರ್ಮಾಣಗೊಂಡರೆ ಜನರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಸಾಗಿಸಲು ಸಮಯ ಶ್ರಮ ಕಡಿಮೆಯಾಗುವುದು ಎಂದು ಹೇಳಿದರು.
ಮಂಗಳೂರು ಎಪಿಎಂಸಿ ಅಧ್ಯಕ್ಷ ಪ್ರಮೋದ್‌ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ತಾ.ಪಂ.ಸದಸ್ಯ ಸುಕುಮಾರ್ ಸನಿಲ್, ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್‌ಕುಮಾರ್ ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಜೊಯಲ್‌ ಡಿಸೋಜ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶಾಲೆಟ್ ಪಿಂಟೋ, ಮಾಜಿ ಜಿ.ಪಂ.ಸದಸ್ಯೆ ಶೈಲಾ ಸಿಕ್ವೇರಾ, ನಿತಿನ್ ಹೆಗ್ಡೆ ಕಾವರ ಮನೆ, ಗುತ್ತಿಗೆದಾರ ಯಾದವ ಕೊಟ್ಯಾನ್ ಪೆರ್ಮುದೆ, ವಿಕ್ರಂ ಮಾಡ, ರಮಾನಂದ ಪೂಜಾರಿ, ಡೋಲ್ಪಿ ಸಂತುಮಾಯೋರ್, ಸುನಿಲ್ ಸಿಕ್ವೇರಾ, ಅನಿತಾ ಅರಾಹ್ನ, ಪ್ರಕಾಶ್‌ ಆಚಾರ್ಯ, ದಯಾನಂದ ಶೆಟ್ಟಿ, ಇಲಾಖೆಯ ಕಾರ್ಯದರ್ಶಿ ಕುಬೇರ್ ನಾಯಕ್, ಅಶೋಕ್‌ಕುಮಾರ್, ಶ್ರೀನಿವಾಸ ಮೂರ್ತಿ, ಜಯಲಕ್ಷ್ಮೀ ಮತ್ತಿತರರು ಇದ್ದರು.

 

Leave a comment.

Your email address will not be published. Required fields are marked*