Admin Jan 12, 2018

ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ಆರ್​ಎಸ್ಎಸ್, ಶ್ರೀರಾಮಸೇನೆ, ಬಜರಂಗದಳ ಸಂಘಟನೆಗಳನ್ನು ನಿಷೇಧಿಸಲಿ ನೋಡೋಣಾ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಸವಾಲು ಹಾಕಿದ್ದಾರೆ.
ಕರ್ನಾಟಕದಲ್ಲಿ ನಡೆದ ಎಲ್ಲಾ ಕೊಲೆಗಳಿಗೆ ಈ ಸಂಘಟನೆಗಳನ್ನು ಹೊಣೆಯಾಗಿಸುವುದು ಸರಿಯಲ್ಲ. ಆರ್​ಎಸ್​ಎಸ್​, ಭಜರಂಗದಳ ಸಂಘಟನೆಗಳ ಬಗ್ಗೆ ಸುಖಾಸುಮ್ಮನೆ ಅಪಪ್ರಚಾರ ಮಾಡುವುದನ್ನು ಮೊದಲು ನಿಲ್ಲಿಸಬೇಕೆಂದು ರಾಜ್ಯಸರ್ಕಾರಕ್ಕೆ ಎಚ್ಚರಿಸಿದರು.
ಸರಣಿ ಕೊಲೆಗಳಲ್ಲಿ ಪಿಎಫ್ಐ ಸಂಘಟನೆಯ ಹೆಸರು ಕೇಳಿಬರುತ್ತಿದ್ದು, ಮೊದಲು ಅದನ್ನು ನಿಲ್ಲಿಸಿ. ಅದು ಬಿಟ್ಟು ದೇಶಭಕ್ತಿಯ ಸಂಘಟನೆಗಳ ಬಗ್ಗೆ ಆರೋಪ ಮಾಡುತ್ತಿರುವುದು ಮೂರ್ಖತನ ಎಂದಿದ್ದಾರೆ.

Leave a comment.

Your email address will not be published. Required fields are marked*