Admin Jan 12, 2018

ಮಂಡ್ಯ: ರಾಜ್ಯದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಸಾಧನಾ ಸಮಾವೇಶ ಇಂದು ಸಕ್ಕರೆ ನಾಡು ಮಂಡ್ಯವನ್ನು ತಲುಪಿದೆ. ಮಂಡ್ಯದಲ್ಲಿ ಇಂದು ಅದ್ಧೂರಿಯಾಗಿ ಸಾಧನಾ ಸಮಾವೇಶ ಜರುಗಲಿದ್ದು, ಸಿಎಂ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ನಿನ್ನೆ ಮೈಸೂರಿನ ವಿವಿಧ ಕಡೆಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಸಿಎಂ ಭಾಗವಹಿಸಿದ್ದು. ಇಂದು ಮಂಡ್ಯ ಜಿಲ್ಲೆಗೆ ತಲುಪಿದ್ದಾರೆ. ಅಲ್ಲಿನ ಜನರನ್ನು ಉದ್ದೇಶಿಸಿ ಮಾತನಾಡಲಿರುವ ಸಿಎಂ ಕೇಂದ್ರ ಸರ್ಕಾರದ ಲೋಪ ದೋಷಗಳನ್ನು ಭಾಷಣದುದ್ದಕ್ಕೂ ಪ್ರಯೋಗಿಸಲಿದ್ದಾರೆ.
ಮಂಡ್ಯ ಜಿಲ್ಲೆಯ ನಾನಾ ಕಡೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸಿಎಂ ಭಾಗವಹಿಸಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮಗಳನ್ನೂ ಮುಗಿಸಿ ಸಂಜೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

Leave a comment.

Your email address will not be published. Required fields are marked*