Admin Jan 11, 2018

ಮಂಗಳೂರು : ಕಾಟಿಪಳ್ಳದಲ್ಲಿ ಇತ್ತೀಚೆಗೆ ನಡೆದ ದೀಪಕ್ ರಾವ್ ಕೊಲೆ ಪ್ರಕರಣದ ಸಂದರ್ಭದಲ್ಲಿ ಕರ್ತವ್ಯ ನಿಷ್ಠೆ ಮೆರೆದ ಗೃಹರಕ್ಷಕ ದಳದ ಸಿಬ್ಬಂದಿ ಮಲ್ಲಿಕಾ ಬಿ. ಮತ್ತು ಹರೀಶ್ ಪೂಜಾರಿಯವರನ್ನು ಪೊಲೀಸ್ ಆಯುಕ್ತರು ಸನ್ಮಾನಿಸಿದರು.

ದೀಪಕ್ ರಾವ್‌ನನ್ನು ಕೊಲೆಗೈದ ಆರೋಪಿಗಳು ಸೂರಿಂಜೆ ಶಿಬರೂರು ಮಾರ್ಗವಾಗಿ ಕಿನ್ನಿಗೋಳಿಗೆ ಪರಾರಿಯಾಗುತ್ತಿದ್ದಾಗ ಮುಲ್ಕಿ ಪೊಲೀಸ್ ಠಾಣೆಯ ವ್ಯಾಪ್ತಿಯ ಉಲ್ಲಂಜೆಯಲ್ಲಿ ರಸ್ತೆಗೆ ಬ್ಯಾರಿಕೇಡ್ ಹಾಕಿ ತಪಾಸಣೆ ಮಾಡುತ್ತಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಕೊಲೆಗಾರರು ಇರುವ ವಾಹನವನ್ನು ತಡೆಯಲು ಯತ್ನಿಸಿದ್ದರು.

ಬ್ಯಾರಿಕೇಡ್ ಮುರಿದ ಆರೋಪಿಗಳು ಪರಾರಿಯಾದಾಗ ಸಿಬ್ಬಂದಿ ಸಮಯ ಪ್ರಜ್ಞೆ ಮತ್ತು ಕರ್ತವ್ಯ ನಿಷ್ಠೆ ಮೆರೆದದ್ದರಿಂದ ಆರೋಪಿಗಳ ಪತ್ತೆಗೆ ಸಹಾಯವಾಗಿತ್ತು.
ಪೊಲೀಸ್ ಆಯುಕ್ತರು ಗೃಹರಕ್ಷಕ ದಳದ ಸಿಬ್ಬಂದಿಗೆ ತಲಾ 5000 ರೂಪಾಯಿ ಬಹುಮಾನ ಮತ್ತು ಪ್ರಶಂಶನಾ ಪತ್ರವನ್ನು ನೀಡಿ ಗೌರವಿಸಿದ್ದಾರೆ.

 

Leave a comment.

Your email address will not be published. Required fields are marked*