Admin Jan 11, 2018

ಬೆಂಗಳೂರು: ಬಿಜೆಪಿ, ಆರ್​ಎಸ್​ಎಸ್​ ನವರನ್ನು ಉಗ್ರಗಾಮಿಗಳೆಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ದಿನೇಶ್ ಗುಂಡೂರಾವ್ ಅವರು ಈ ಕೂಡಲೇ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ನಾಳೆಯಿಂದ ರಾಜ್ಯಾದ್ಯಂತ ಜೈಲ್ ಭರೋ ಚಳುವಳಿ ಆರಂಭಿಸುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ದೇಶದಲ್ಲಿ ಉಗ್ರರನ್ನು ಬೆಳೆಸಿರೋ ಕಾಂಗ್ರೆಸ್ ಇದೀಗ ರಾಜ್ಯದಲ್ಲಿಯೂ ದೇಶದ್ರೋಹಿ ಸಂಘಟನೆಗಳ ಜೊತೆ ಸೇರಿ ಉಗ್ರವಾದವನ್ನು ಬೆಳೆಸುತ್ತಿದೆ ಎಂದು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಅಲ್ಲದೇ ನಮ್ಮನ್ನು ಉಗ್ರರೆಂದಿರುವ ರಾಜ್ಯ ಸರ್ಕಾರ ಈ ಕೂಡಲೇ ಬಂಧಿಸಲಿ ಎಂದು ಸವಾಲು ಹಾಕಿದರು.

Leave a comment.

Your email address will not be published. Required fields are marked*