Admin Jan 11, 2018

ಬ್ರಹ್ಮಾವರ: ಬ್ರಹ್ಮಾವರ ಸೈಂಟ್ ಮೇರಿಸ್ ಓರ್ಥೋಡೋಕ್ಸ್ ಸಿರಿಯನ್ ಕೆಥೆಡ್ರಲ್ ನೂತನ ಕಟ್ಟಡದ ಪವಿತ್ರ ಶುದ್ಧೀಕರಣ ಮತ್ತು ಉದ್ಘಾಟನೆಗಾಗಿ ಮಲಂಕರ ಓರ್ಥೋಡೊಕ್ಸ್ ಸಿರಿಯನ್ ಸಭೆಯ ಪರಮಾಧ್ಯಕ್ಷ ಕಥೋಲಿಕೊಸ್ ಬಸೆಲಿಯೋಸ್ ಮಾರ್ತೋಮಾ ದ್ವಿತಿಯರು ಬುಧವಾರ ಬ್ರಹ್ಮಾವರಕ್ಕೆ ಆಗಮಿಸಿದರು.

ಅವರನ್ನು ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧಕ್ಷ ಯಾಕೊಬ್ ಮಾರ್ ಎಲಿಯಾಸ್, ಎಸ್‌ಎಂಎಸ್ ಕೆಥೆಡ್ರಲ್ ವಿಕಾರ್ ಜನರಲ್ ರೆ.ಫಾ. ಸಿ.ಎ. ಐಸಾಕ್ ಸ್ವಾಗತಿಸಿದರು. ಸಹಾಯಕ ಧರ್ಮಗುರುಗಳಾದ ಫಾ.ಲಾರೆನ್ಸ್ ಡಿಸೋಜ, ಫಾ.ಡೇವಿಡ್ ಕ್ರಾಸ್ತಾ, ಫಾ.ಅಬ್ರಾಹಂ ಕುರಿಯೋಕೊಸ್, ಫಾ.ಲೋವೆಲ್ ಲೂವಿಸ್, ಫಾ.ಜೋಸೆಫ್ ಚಾಕೋ, ಟ್ರಸ್ಟಿ ಅನಿಲ್ ಬಿ. ರೋಡ್ರಿಗಸ್, ಕಟ್ಟಡ ಸಮಿತಿ ಸಂಚಾಲಕ ಅಲೆನ್ ರೋಹನ್ ವಾಜ್ ಮೊದಲಾದವರು ಉಪಸ್ಥಿತರಿದ್ದರು.

Leave a comment.

Your email address will not be published. Required fields are marked*