Admin Jan 10, 2018

ನವದೆಹಲಿ: ನಿತ್ಯದ ಟ್ರಾಫಿಕ್ ಜಂಜಾಟದಲ್ಲಿ ಸಿಲುಕಿ ಒದ್ದಾಡುವವರಿಗೆ ಶುಭ ಸುದ್ದಿ. ಶೀಘ್ರದಲ್ಲೇ ಭಾರತದಲ್ಲಿ ’ಏರ್ ರಿಕ್ಷಾ’ಗಳು ಹಾರಾಡಲಿದೆ ಎಂಬ ಸೂಚನೆಯನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜಯಂತ್ ಸಿನ್ಹಾ ನೀಡಿದ್ದಾರೆ.

ಟ್ರಾಫಿಕ್ ದಟ್ಟಣೆಯಿಂದ ಬೇಸತ್ತವರಿಗಾಗಿ ಸಹಾಯ ಮಾಡಲೆಂದೇ ದ್ರೋನ್ ತಂತ್ರಜ್ಞಾನ ಆಧಾರಿತ ಏರ್ ರಿಕ್ಷಾಗಳನ್ನು ಹಾರಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಸುಗಮ ಸಾರಿಗೆ ವ್ಯವಸ್ಥೆಗಾಗಿ ದ್ರೋನ್ ತಂತ್ರಜ್ಞಾನ ಆಧಾರಿತ ‘ಏರ್ ರಿಕ್ಷಾ’ಗಳನ್ನು ಪರಿಚಯಿಸುವ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ, ಟ್ರಾಫಿಕ್ ದಟ್ಟಣೆ ತಡೆಯಲು ಈ ಏರ್ ರಿಕ್ಷಗಳು ಸಹಕಾರಿಯಾಗಬಲ್ಲವು ಎಂದಿದ್ದಾರೆ.

Leave a comment.

Your email address will not be published. Required fields are marked*