Admin Jan 10, 2018

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) 2016-17ನೇ ಸಾಲಿನಲ್ಲಿ ವಿದೇಶಗಳ ಸೆಟ್‌ಲೈಟ್ ಉಡಾವಣೆಗೊಳಿಸುವ ಮೂಲಕ ರೂ.288.75 ಕೋಟಿಗಳನ್ನು ಸಂಪಾದಿಸಿದೆ ಎಂದು ಬಾಹ್ಯಾಕಾಶ ಇಲಾಖೆ ಸಂಸತ್ತಿಗೆ ತಿಳಿಸಿದೆ.

2015-16ನೇ ಸಾಲಿನಲ್ಲಿ ಇಸ್ರೋ ರೂ.420.9 ಕೋಟಿಗಳಷ್ಟು ಗಳಿಸಿತ್ತು. ಈ ಬಾರಿ ಅದಕ್ಕಿಂತ ಕಡಿಮೆ ಗಳಿಸಿದೆ. ಆದರೆ 2014-15ಕ್ಕೆ ಹೋಲಿಸಿದರೆ ಗಳಿಕೆ ಹೆಚ್ಚಾಗಿದೆ.

ಇಸ್ರೋ 2016-17ನೇ ಸಾಲಿನಲ್ಲಿ ಅಲ್ಜೀರಿಯಾ, ಕೆನಡಾ, ಜರ್ಮನಿ, ಇಂಡೋನೇಷ್ಯಾ, ಇಸ್ರೇಲ್, ನೆದರ್‌ಲ್ಯಾಂಡ್, ಕಜಕೀಸ್ತಾನ್, ಯುನೈಟೆಡ್ ಅರಬ್ ಎಮಿರೈಟ್ಸ್, ಯುಎಸ್‌ಗಳ ಸೆಟ್‌ಲೈಟ್ ಉಡಾವಣೆಗೊಳಿಸಿದೆ.

ಇದುವರೆಗೆ ಇಸ್ರೋ ಸುಮಾರು 200 ವಿದೇಶಿ ಸೆಟ್‌ಲೈಟ್‌ಗಳನ್ನು ಉಡಾವಣೆ ಮಾಡಿದೆ, ಇದರಲ್ಲಿ 101ನ್ಯಾನೋಸೆಟ್‌ಲೈಟ್‌ಗಳೂ ಸೇರಿವೆ.

Leave a comment.

Your email address will not be published. Required fields are marked*