Admin Jan 10, 2018

ಮಂಗಳೂರು: ಎ.ಜೆ. ಹಾಸ್ಪಿಟಲ್‌ ಮತ್ತು ಸಂಶೋಧನಾ ಕೇಂದ್ರವು ವಿಭಿನ್ನ ಹಾಗೂ ಅಪರೂಪದ ಚಿಕಿತ್ಸೆಗಳನ್ನು ಮೊತ್ತಮೊದಲ ಬಾರಿಗೆ ಮಾಡಿದ ಕೀರ್ತಿಯನ್ನು ಹೊಂದಿದ್ದು, ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆ ಗಳನ್ನು ಮಾಡುವ ಮೂಲಕ ಸಾಧನೆ ಮಾಡಿದೆ.

ಸೂಕ್ಷ್ಮರಂಧ್ರ ಚಿಕಿತ್ಸೆಯು ಇತ್ತೀಚಿನ ಹೃದ್ರೋಗ ಶಸ್ತ್ರಚಿಕಿತ್ಸೆಗಳನ್ನು ಮಾಡುವ ಹೊಸ ಬೆಳವಣಿಗೆ ಯಾಗಿದೆ. ಎ.ಜೆ. ಆಸ್ಪತ್ರೆಯ ಹೃದ್ರೋಗ ಶಸ್ತ್ರಚಿಕಿತ್ಸಾ ವಿಭಾಗವು ಕಾರ್ಡಿಯೋ ಥೋರಾಸಿಕ್‌ ಸರ್ಜರಿಯ ಎಲ್ಲ ವಿಭಾಗಗಳಲ್ಲಿ ಸೂಕ್ಷ್ಮ ರಂಧ್ರ ಚಿಕಿತ್ಸೆಯನ್ನು ಪ್ರಾರಂಭಿಸಿದೆ. ಹುಟ್ಟಿನಿಂದಲೇ ಬಂದ ಹೃದ್ರೋಗ ಕಾಯಿಲೆಯ ಶಸ್ತ್ರಚಿಕಿತ್ಸೆ, ವಯಸ್ಕರಲ್ಲಿನ ಹೃದ್ರೋಗ ಶಸ್ತ್ರಚಿಕಿತ್ಸೆ ಮತ್ತು ಥೋರಾಸಿಕ್‌ ಶಸ್ತ್ರಚಿಕಿತ್ಸೆಗಳನ್ನು ನಿರಂತರವಾಗಿ ಮಾಡ ಲಾಗುತ್ತಿದೆ.

ಕಾರವಾರದ ಸುಮಾರು 35ರ ಹರೆಯದ ಕಾರ್ಮಿಕರೊಬ್ಬರ ಹೃದಯದ ರಕ್ತ ನಾಳದ ತಡೆಯನ್ನು ಸೂಕ್ಷ್ಮ ರಂಧ್ರಚಿಕಿತ್ಸೆಯ ಮೂಲಕ ನಡೆಸಲಾಗಿದೆ. 17 ವರ್ಷದ ಬಾಲಕಿಯೊಬ್ಬಳು ಹೃದಯ ದಲ್ಲಿ ರಂಧ್ರಗಳನ್ನು ಹೊಂದಿದ್ದು ಯಶಸ್ವಿಯಾಗಿ ಸೂಕ್ಷ್ಮರಂಧ್ರ ಚಿಕಿತ್ಸೆಗೆ ಒಳಪಟ್ಟಿದ್ದರು.  ಇದರ ಹೊರತಾಗಿ ವಿಡಿಯೋ ನೆರವಿನ ಥೋರಾಸ್ಕೋಪಿ ಸರ್ಜ ರಿಯು ನಿಯಮಿತವಾಗಿ ಸೂಕ್ತ ಪ್ರಕರಣಗಳಲ್ಲಿ ನಡೆಸಲಾಗುತ್ತಿದೆ. ಇಂತಹ ಶಸ್ತ್ರಚಿಕಿತ್ಸೆಗಳು ರೋಗಿಗೆ ಬೇಗನೆ ಗುಣಮುಖರಾಗಲು ಸಹಾಯ ಮಾಡುವುದಲ್ಲದೆ, ಇದು ಕಡಿಮೆ ನೋವಿನಿಂದ ಕೂಡಿದ್ದು, ದೇಹದ ಮೇಲೆ ಶಸ್ತ್ರ ಚಿಕಿತ್ಸೆಯ ಕಡಿಮೆ ಗುರುತುಗಳನು ಹೊಂದಿದೆ  ಎಂದು ಎ.ಜೆ. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಪ್ರಶಾಂತ್‌ ಮಾರ್ಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಎ.ಜೆ. ಆಸ್ಪತ್ರೆಯಲ್ಲಿ ಹೃದ್ರೋಗಕ್ಕೆ ಯಶಸ್ವಿ ಸೂಕ್ಷ್ಮ ರಂಧ್ರ ಶಸ್ತ್ರಚಿಕಿತ್ಸೆ ನಡೆಸಲಾಯಿತು.

Leave a comment.

Your email address will not be published. Required fields are marked*