Admin Jan 7, 2018

ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ದಂಪತಿ ಮುಂಬೈನ ಬಾಂದ್ರಾ ನಗರದಲ್ಲಿರುವ ದೊಡ್ಡ ಕಾಂಪ್ಲೆಕ್ಸ್ ಅಪಾರ್ಟ್ ಮೆಂಟ್ ಖರೀದಿಸಿದ್ದಾರೆ.

2015 ರಲ್ಲೇ ಕೊಂಡುಕೊಂಡಿರುವ ಈ ಮನೆಯನ್ನು ಈಗ ನೂತನವಾಗಿ ವಿನ್ಯಾಸ ಮಾಡಿಸಲಾಗಿದೆ. ಒಂದು ಅಡಿಗೆ 38,000 ರೂಪಾಯಿಯಂತೆ 5500 ಅಡಿ ಜಾಗದ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಇದರ ಬೆಲೆ 21 ಕೋಟಿ. ಮುಂಬೈನ ಜುಹಾ ನಗರದಲ್ಲಿ ರೈ ದಂಪತಿಗಳು ಈಗ ವಾಸವಾಗಿದ್ದಾರೆ. ಮುಂಬೈನ ವರ್ಲಿಯಲ್ಲಿ ಇನ್ನೊಂದು ಮನೆ ಹೊಂದಿದ್ದಾರೆ. ದುಬೈನಲ್ಲಿ ಒಂದು ವಿಲ್ಲಾ ಇದೆ.

ಬಾಂದ್ರಾದ ಈ ಮನೆಯನ್ನು ಕಂದು ಬಣ್ಣದಲ್ಲಿ ಡಿಸೈನ್ ಮಾಡಲಾಗಿದೆ. ಜೊತೆಗೆ ಗಾಜಿನಿಂದ ತಯಾರಾದ ಕಿಟಕಿ, ಮತ್ತು ಬಾಗಿಲುಗಳು ನೋಡಬಹುದು.

ಅಡುಗೆ ಸುಂದರವಾಗಿದ್ದು, ಮನೆಯ ಸಾಮಗ್ರಿಗಳನ್ನ ಇಡಲು ಮತ್ತು ಅಡುಗೆ ಮಾಡಲು ಉತ್ತಮವಾಗಿ ಡಿಸೈನ್ ಮಾಡಲಾಗಿದೆ.

ಮಗಳಿಗಾಗಿ ವಿಶೇಷವಾದ ಬೆಡ್ ರೂಂ ವ್ಯವಸ್ಥೆ ಮಾಡಲಾಗಿದೆ. ಕಲರ್ ಫುಲ್ ಆಗಿರುವ ಈ ಕೋಣೆಯ ಗೋಡೆ ಮೇಲೆ ಕಾರ್ಟೂನ್ ಚಿತ್ರಗಳನ್ನು ಬಿಡಿಸಲಾಗಿದೆ.

ಮನೆಯ ಒಳಗೆಯ ವಿಶಾಲವಾದ ಸ್ವಿಮ್ಮಿಂಗ್ ಫೂಲ್ ವ್ಯವಸ್ಥೆ ಮಾಡಲಾಗಿದೆ. ಬೀಚ್ ರೀತಿಯಲ್ಲಿ ಈ ಸ್ವಿಮ್ಮಿಂಗ್ ಫೂಲ್ ಕಟ್ಟಲಾಗಿದೆ. ಇದರ ಜತೆಗೆ ವಿಭಿನ್ನ ರೀತಿಯ ಬಗೆ ಬಗೆಯ ಬೆಡ್ ರೂಂ ನಿರ್ಮಿಸಲಾಗಿದೆ. ಒಂದು ಕಡೆ ದೊಡ್ಡ ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಮತ್ತೊಂದೆಡೆ ಡಬಲ್ ಬೆಡ್ ಹಾಕಲಾಗಿದೆ.

Leave a comment.

Your email address will not be published. Required fields are marked*