Admin Jan 6, 2018

ಮುಂಬೈ: ಗ್ಲಾಮರ್​ ಲೋಕದಲ್ಲಿ ಇಂದಿಗೂ ತನ್ನ ಹೆಸರನ್ನು ಭದ್ರವಾಗಿಟ್ಟುಕೊಂಡ ನಟಿ ಐಶ್ವರ್ಯಾ ರೈ ಅವರು ಇದೀಗ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದು, ಇದಕ್ಕಾಗಿ ಸುಮಾರು 10 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಹೌದು 1967ರಲ್ಲಿ ನರ್ಗಿಸ್ ದತ್ ಅಭಿನಯಿಸಿದ್ದ ‘ಕ್ಲಾಸಿಕ್ ರಾತ್ ಔರ್ ದಿನ್’ ಚಿತ್ರದಲ್ಲಿ ಐಶ್ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರದಲ್ಲಿ ನಟಿಸಲು ಬರೋಬ್ಬರಿ 10ಕೋಟಿ ಡಿಮ್ಯಾಂಡ್​ ಮಾಡಿದ್ದಾರೆ.

ಈ ಚಿತ್ರದಲ್ಲಿ ಐಶ್​ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರವನ್ನು ಪ್ರೇರಣಾ ಹಾಗು ಅರ್ಜುನ್ ಎನ್ ಕಪೂರ್ ಅವರು ನಿರ್ಮಿಸುತ್ತಿದ್ದಾರೆ. ಅಲ್ಲದೇ ಐಶ್ವರ್ಯಾ ರೈ ಅವರಿಗೆ 10 ಕೋಟಿ ಸಂಭಾವನೆ ನೀಡಲು ಇವರಿಬ್ಬರೂ ತಕ್ಷಣ ಒಪ್ಪಿಕೊಂಡಿದ್ದಾರೆ.

Leave a comment.

Your email address will not be published. Required fields are marked*