Admin Jan 4, 2018

ಸುರತ್ಕಲ್ : ನಿನ್ನೆ ಮಧ್ಯಾಹ್ನ ಕಾಟಿಪಳ್ಳದಲ್ಲಿ ಬಿಜೆಪಿ ಕಾರ್ಯಕರ್ತರ ದೀಪಕ್ ರಾವ್‌ನನ್ನು ನಾಲ್ವರು ದುಷ್ಕರ್ಮಿಗಿಳು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಲಾಗಿದ್ದು, ಇದಕ್ಕೆ ಸಂಬಂಪಟ್ಟಂತೆ ಸುರತ್ಕಲ್ ಮತ್ತು ಕಾಟಿಪಳ್ಳ ಬಂದ್‌ಗೆ ಬಿಜೆಪಿ, ಭಜರಂಗದಳ, ವಿಶ್ವಹಿಂದು ಪರಿಷತ್ ಕರೆ ನೀಡಿದ್ದಾರೆ.
ಇದರ ಪರಿಣಾಮವಾಗಿ ಇಂದು ಬೆಳಿಗ್ಗೆ ಯಾವುದೇ ಬಸ್ಸುಗಳು ಈ ಭಾಗಕ್ಕೆ ಸಂಚರಿಸುತ್ತಿಲ್ಲ. ಜನರು ಭೀತಿಗೊಂಡಿದ್ದು, ಮನೆಯಿಂದ ಹೊರಗೆ ಕಾಲಿಟ್ಟಿಲ್ಲ. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಬೆಳಿಗ್ಗೆ 9.00 ಕ್ಕೆ ದೀಪಕ್ ರಾವ್ ಶವಯಾತ್ರೆಯೂ ಮಂಗಳೂರಿನ ಎ.ಜೆ.ಆಸ್ಪತ್ರೆಯಿಂದ ಕಾಟಿಪಳ್ಳಕ್ಕೆ ಸುರತ್ಕಲ್ ಮೂಲಕ ಸಾಗಲಿದ್ದು, ಈ ಸಂದರ್ಭದಲ್ಲಿ ಅಹಿತಕರ ಘಟನೆಗಳ ನಡೆಯುವ ಸಾಧ್ಯತೆಯ ಬಗ್ಗೆ ಭೀತಿಪಡಲಾಗಿದೆ. ದೀಪಕ್ ರಾವ್ ಅಂತಿಮ ಸಂಸ್ಕಾರವು ಕಾಟಿಪಳ್ಳದ ರುದ್ರಭೂಮಿಯಲ್ಲಿ ನಡೆಯಲಿದೆ.
ದೀಪಕ್ ಕೊಲೆಗೆ ಪ್ರತೀಕಾರವಾಗಿ ನಿಮ್ಮ ರಾತ್ರಿ ಕೊಟ್ಟರ ಚೌಕಿಯಲ್ಲಿ ವ್ಯಕ್ತಿಯೋರ್ವರಿಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಚೂರಿಯಿಂದ ಇರಿದದ್ದು. ಗಾಯಾಳು ಗಂಭೀರವಾಗಿದ್ದು ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮುದಸ್ಸರ್ ಮತ್ತು ಬಶೀರ್ ಎಂಬವರಿಗೆ ನಿನ್ನೆ ರಾತ್ರಿ ಚೂರಿ ಇರಿತ ಸಂಭವಿಸಿದೆ.

ಹಿರಿಯ ಪೊಲೀಸ್ ಅಧಿಕಾರಿಗಳು ಮಂಗಳೂರಿಗೆ ಬಂದಿದ್ದು ಈಗಾಗಲೇ ನಿಷೇಧಾಜ್ಞೆಯನ್ನು ಹಾಕಲಾಗಿದೆ. ಅಗತ್ಯ ಬಿದ್ದರೆ ಕರ್ಫ್ಯೂ ವಿಧಿಸಲು ಸಿದ್ದತೆ ನಡೆಯುತ್ತಿದೆ. ಜಿಲ್ಲೆಯ ಹೊರಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು ಮಂಗಳೂರಿನತ್ತ ಆಗಮಿಸುತ್ತಿದ್ದಾರೆ. ಇಂದು ಯಾವ ಪರಿಸ್ಥಿತಿ ಎದುರಾದರೂ ಅದನ್ನು ತಡೆಯಲುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

ನಿನ್ನೆ ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ಶಾಂತಾರಾಮ್ ಪಣಂಬೂರು ಪೊಲೀಸ್ ಅಧಿಕಾರಿ ರಫೀಕ್ ಅವರು ರಫೀಕ ಹತ್ಯೆ ದುಷ್ಕರ್ಮಿಗಳಾದ ಪಿಂಕಿ ನವಾಜ್ ಮತ್ತು ರಿಜ್ವಾನ್‌ರನ್ನು ಗುಂಡು ಹಾರಿಸುವುದರ ಮೂಲಕ ಬಂಧಿಸಿದ್ದರು. ಗಾಯಾಳು ಆರೋಪಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪರಾಧ ನಡೆದ ನಾಲ್ಕು ಗಂಟೆಗಳ ಒಳಗೆ ದುಷ್ಕರ್ಮಿಗಳು ತೀವ್ರ ಪ್ರತಿರೋಧ ತೋರಿ ಪೊಲೀಸರ ಮೇಲೆ ಹಲ್ಲೆ ನಡೆಸಿದರೂ ಅವರನ್ನು ಬೆನ್ನಟ್ಟಿ ಬಂಧಿಸಿದ ಪೊಲೀಸರು ಪ್ರಶಂಸೆಗೆ ಒಳಗಾಗಿದ್ದಾರೆ.

Leave a comment.

Your email address will not be published. Required fields are marked*