Admin Dec 7, 2017

ಮೈಸೂರು: ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ ಅವರು ಬೆಂಗಳೂರಿನ ಇಂದಿರಾನಗರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದಾರೆ.

ಯದುವಂಶಕ್ಕೆ ಗಂಡು ಮಗುವಿನ ಆಗಮನದಿಂದ ಮೈಸೂರಿನ ಅಂಬಾ ವಿಲಾಸ ಅರಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಪತಿ ಯದುವೀರ್ ಕೃಷ್ಣದತ್ತ ಒಡೆಯರ್, ಪ್ರಮೋದಾ ದೇವಿ, ತ್ರಿಷಿಕಾ ಪೋಷಕರು ಹಾಗೂ ಆಪ್ತರು ಆಸ್ಪತ್ರೆಯಲ್ಲಿದ್ದು, ರಾಜಮನೆತನದ ನೂತನ ಸದಸ್ಯನ ಆಗಮನಕ್ಕೆ ಸಂಭ್ರಮ ವ್ಯಕ್ತಪಡಿಸಿದರು.


ತ್ರಿಷಿಕಾ ಗಂಡು ಮಗುವಿಗೆ ಜನ್ಮ ನೀಡುತ್ತಿದ್ದಂತೆಯೇ, ಸದ್ಯ ಅಲಮೇಲಮ್ಮನ ಶಾಪವಿಮೋಚನೆಯಾಯ್ತೇನೋ’ ಎಂದು ಹಲವರು ನಿಟ್ಟುಸಿರು ಬಿಟ್ಟಿದ್ದಾರೆ.
ಮೈಸೂರಿನ ಮುದ್ದು ರಾಜಕುಮಾರನ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಷ್ಟೇ ಅಲ್ಲದೇ, ಆಸ್ಪತ್ರೆಯಲ್ಲಿ ತ್ರಿಷಿಕಾ ಕುಮಾರಿ ತಮ್ಮ ಮಗುವನ್ನು ಎತ್ತಿ ಮುದ್ದಿಸುತ್ತಿರುವ ದೃಶ್ಯವೂ ಹರಿದಾಡುತ್ತಿದೆ.


ತ್ರಿಷಿಕಾ ಅವರಿಗೆ ಹೆರಿಗೆ ನೋವು ಶುರುವಾಗಿ ಅವರು ಬೆಂಗಳೂರಿನ ಇಂದಿರಾ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಮೈಸೂರಿನಿಂದ ಬೆಂಗಳೂರಿಗೆ ಹೊರಟ ರಾಜಮಾತೆ ಪ್ರಮೋದಾ ದೇವಿ, ಮೊಮ್ಮಗ ಮತ್ತು ರಾಜಕುಮಾರನ ಆಗಮನದ ಖುಷಿ ಹಂಚಿಕೊಂಡಿದ್ದಾರೆ.

Leave a comment.

Your email address will not be published. Required fields are marked*