Admin Dec 7, 2017

ನವದೆಹಲಿ: ಯುನೆಸ್ಕೋದ ಇಂಟರ್‌ಗವರ್ನ್‌ಮೆಂಟಲ್ ಸಮಿತಿಯು ಹಿಂದೂಗಳ ಪಾಲಿನ ಮಹಾ ಸಂಗಮ ‘ಕುಂಭಮೇಳ’ವನ್ನು ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ ಪ್ರತಿನಿಧಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ.

ಡಿ.3-4ರಂದು ದಕ್ಷಿಣ ಕೊರಿಯಾದ ಜೆಜುವಿನಲ್ಲಿ ನಡೆದ 12ನೇ ಸೆಷನ್ಸ್‌ನಲ್ಲಿ ಅಮೂರ್ತವಾದ ಸಾಂಸ್ಕೃತಿಕ ಪರಂಪರೆಗಳನ್ನು ಸಂರಕ್ಷಿಸುವ ಇಂಟರ್‌ಗವರ್ನ್‌ಮೆಂಟಲ್ ಸಮಿತಿಯು ಕುಂಭಮೇಳವನ್ನು ಈ ಪಟ್ಟಿಗೆ ಸೇರಿಸಿದೆ.

2016ರಲ್ಲಿ ಯೋಗ ಮತ್ತು ನೌರೋಝ್ ಈ ಪಟ್ಟಿಗೆ ಸೇರಿತ್ತು. ಇದೀಗ ಕುಂಭ ಮೇಳ ಈ ಗೌರವಕ್ಕೆ ಪಾತ್ರವಾಗಿದೆ.

ಕುಂಭಮೇಳವನ್ನು ಭೂಮಿ ಮೇಲಿನ ಅತ್ಯಂತ ಶಾಂತಿಯುತವಾದ ಯಾತ್ರಾರ್ಥಿಗಳ ಅತೀದೊಡ್ಡ ಸಂಗಮ ಎಂದು ಸಮಿತಿ ಬಣ್ಣಿಸಿದೆ.

Leave a comment.

Your email address will not be published. Required fields are marked*