Admin Dec 7, 2017

ಬೆಂಗಳೂರು: ಮಹಾನಗರ ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರು ಸಂಗ್ರಹಿಸಿದ ದಂಡದ ಮೊತ್ತ ದಾಖಲೆಯ ಮಟ್ಟದಲ್ಲಿ ಈ ವರ್ಷ ಏರಿಕೆ ಕಂಡಿದೆ. ಜನವರಿ-ನವೆಂಬರ್ ಅವಧಿಯಲ್ಲಿ ಬರೋಬ್ಬರಿ ರೂ.100ಕೋಟಿ ಸಂಗ್ರಹವಾಗಿದೆ.

ಪ್ರತಿ ಗಂಟೆಗೆ ಇಲ್ಲಿ 1,178 ಜನರು ದಂಡ ಪಾವತಿಸುತ್ತಿದ್ದಾರೆ. ಇದರಿಂದ ಗಂಟೆಗೆ ರೂ.1.2 ಲಕ್ಷ ರೂಪಾಯಿ ಸಂಗ್ರಹವಾಗುತ್ತಿದೆ.ಇದುವರೆಗೆ ಪೊಲೀಸರು ಒಟ್ಟು 94.63 ಲಕ್ಷ ಪ್ರಕರಣಗಳನ್ನು ನೋಂದಾಯಿಸಿಕೊಂಡಿದ್ದಾರೆ.

ದಂಡ ಸಂಗ್ರಹದಲ್ಲಿ ಭಾರೀ ಏರಿಕೆ ಕಂಡಿರುವುದನ್ನು ಎರಡು ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗಿದೆ. ಒಂದು ಬೆಂಗಳೂರು ಜನತೆ ನಿರಂತರ ಟ್ರಾಫಿಕ್ ನಿಯಮ ಉಲ್ಲಂಘನೆಯಲ್ಲಿ ತೊಡಗಿದ್ದಾರೆ, ಮತ್ತೊಂದು ಪೊಲೀಸರು ಕಟ್ಟುನಿಟ್ಟಾಗಿ ತಮ್ಮ ಕಾರ್ಯವನ್ನು ಮಾಡುತ್ತಿದ್ದಾರೆ.

Leave a comment.

Your email address will not be published. Required fields are marked*