Admin Dec 7, 2017

ಭಟ್ಕಳ: ತಾಲೂಕಿನ ಸಾರದಹೊಳೆ ಶಿರಾಲಿಯ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನದ ನೂತನ ಶಿಲಾಮಯ ಕಟ್ಟಡದ ನಿಧಿಕುಂಭ ಸ್ಥಾಪನಾ ಕಾರ್ಯಕ್ರಮವೂ ಶ್ರೀ ರಾಮ ಕ್ಷೇತ್ರ ಧರ್ಮಸ್ಥಳ ಬ್ರಹ್ಮಾನಂದ ಸರಸ್ವತೀ ಸ್ವಾಮೀಗಳ ದಿವ್ಯ ಉಪಸ್ಥಿತಿಯಲ್ಲಿ ಬೆಳಿಗ್ಗೆ ನೆರವೇರಿತು.

ನಿಧಿ ಕುಂಭ ಸ್ಥಾಪನಾ ಕಾರ್ಯಕ್ರಮವೂ ಸಕಲ ಧಾರ್ಮಿಕ ವಿಧಾನದ ಮೂಲಕ ಗೋಕರ್ಣ ಮೂಲದ ವೇದಮೂರ್ತಿ ಕೃಷ್ಣಭಟ್ಟ ನಡೆಸಿಕೊಟ್ಟರು. ಬ್ರಹ್ಮಾನಂದ ಸರಸ್ವತೀ ಸ್ವಾಮೀಗಳು ನಿಧಿಕುಂಭ ಸ್ಥಾಪನೆ ಕಾರ್ಯಕ್ರಮಕ್ಕೆ ಬಂದಂತಹ ಭಕ್ತರಿಗೆ ಆರ್ಶೀವದಿಸಿ ಮಂತ್ರಾಕ್ಷತೆಯನ್ನು ನೀಡಿದರು.

ಬಳಿಕ ದೇವಸ್ಥಾನ ಭಕ್ತರು ನಿಧಿ ಕುಂಭ ಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ಸಂಧರ್ಭದಲ್ಲಿ ಶಾಸಕ ಮಂಕಾಳ ವೈದ್ಯ, ಮಾವಳ್ಳಿ ಶಿರಾಲಿ ಸಾರದಹೊಳೆಯ ನಾಮಧಾರಿ ಅಭಿವೃದ್ಧಿ ಸಂಘ ಅಧ್ಯಕ್ಷ ಬಿ.ಕೆ.ನಾಯ್ಕ, ಗೌರವ ಕಾರ್ಯದರ್ಶಿ ಸುಬ್ರಾಯ ನಾಯ್ಕ, ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವ ಟ್ರಸ್ಟನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ಎಸ್ ನಾಯ್ಕ ಹಾಗೂ ಸದಸ್ಯರು, ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಳದ ಟ್ರಸ್ಟಿ ರಾಮಾ ಮಾಸ್ತಿ ನಾಯ್ಕ, ಸುಬ್ರಾಯ ಜಟ್ಟ ನಾಯ್ಕ, ಶಿರಾಲಿ ಯುವ ಮುಖಂಡ ಸುನೀಲ ನಾಯ್ಕ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Leave a comment.

Your email address will not be published. Required fields are marked*