Admin Dec 7, 2017

ನವದೆಹಲಿ: ಸರ್ಕಾರದ ವಿವಿಧ ಸೇವೆ ಮತ್ತು ಯೋಜನೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಲು ನೀಡಿರುವ ಡೆಡ್‌ಲೈನ್‌ನನ್ನು 2018ರ ಮಾಚ್.31ರವರೆಗೆ ವಿಸ್ತರಣೆ ಮಾಡಲು ಸಿದ್ಧವಾಗಿರುವುದಾಗಿ ಕೇಂದ್ರ ಹೇಳಿದೆ.

ಸುಪ್ರೀಂಕೋಟ್‌ನಲ್ಲಿ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಆಫ್ ಇಂಡಿಯಾ ಕೆ.ಕೆ.ವೇಣುಗೋಪಾಲ್ ಅವರು, ಆಧಾರ್ ಜೋಡಣೆ ಗಡುವನ್ನು ಮಾ.31ರವರೆಗೆ ವಿಸ್ತರಿಸಿ ನಾಳೆಯೇ ಅಧಿಸೂಚನೆ ಹೊರಡಿಸುತ್ತೇವೆ ಎಂದರು.

ಆದರೆ ಮೊಬೈಲ್‌ಗೆ ಆಧಾರ್ ಲಿಂಕ್ ಮಾಡಲು ಇರುವ ಕೊನೆಯ ದಿನಾಂಕ ಫೆಬ್ರವರಿ 6 ಆಗಿದ್ದು, ಅದರಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ.

ಆಧಾರ್ ಲಿಂಕ್ ಕಡ್ಡಾಯಗೊಳಿಸಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಗೆ ಮುಂದಿನ ವಾರವೇ ಸುಪ್ರೀಂ ಐವರು ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠವನ್ನು ರಚನೆ ಮಾಡಲಿದೆ.

Leave a comment.

Your email address will not be published. Required fields are marked*