Admin Dec 7, 2017

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ದೆಹಲಿಯ ಜನ್‌ಪಥ್‌ನಲ್ಲಿ ಡಾ.ಬಿರ್ ಅಂಬೇಡ್ಕರ್ ಇಂಟರ್‌ನ್ಯಾಷನಲ್ ಸೆಂಟರ್‌ನ್ನು ಲೋಕಾರ್ಪಣೆಗೊಳಿಸಿದರು.

ದಲಿತೋದ್ಧಾರಕ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಚಿಂತನೆಗಳ ಪ್ರಚಾರಗಳಿಗೆ ಮತ್ತು ಸಾಮಾಜಿಕ ಹಾಗೂ ಆರ್ಥಿಕ ವಿಷಯಗಳ ಸಂಶೋಧನೆಗೆ ಈ ಸೆಂಟರ್ ಮಹತ್ವದ ಸ್ಥಳವಾಗಲಿದೆ. ಇಲ್ಲಿಂದ ಯುವಕರು ಪ್ರೇರಣೆ ಪಡೆದುಕೊಳ್ಳಬೇಕು ಎಂದು ಪ್ರಧಾನಿ ಹೇಳಿದರು.

ದೆಹಲಿ, ಮುಂಬಯಿ, ನಾಗ್ಪುರ, ಮೊವ್, ಲಂಡನ್‌ನಲ್ಲಿನ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಜಾಗಗಳನ್ನು ಸರ್ಕಾರ ಅಭಿವೃದ್ಧಿಪಡಿಸಿದ್ದು, ಅವುಗಳು ಪ್ರಮುಖ ಯಾತ್ರಸ್ಥಳಗಳಾಗಿ ಪರಿವರ್ತಿತಗೊಂಡಿವೆ ಎಂದಿದ್ದಾರೆ.

Leave a comment.

Your email address will not be published. Required fields are marked*