Admin Dec 7, 2017

ಉಡುಪಿ: ವ್ಯವಸ್ಥೆಯೊಳಗಿನ ಭ್ರಷ್ಟಾಚಾರಕ್ಕೆ ಸಿಡಿದೆದ್ದು ಡಿಎಸ್ಪಿ ಹುದ್ದೆಗೆ ರಾಜೀನಾಮೆ ನೀಡಿರುವ ಉಡುಪಿ ಮೂಲದ ಅನುಪಮ್ ಶೆಣೈ ಅವರು ರಾಜಕೀಯಕ್ಕೆ ಧುಮುಕುತ್ತಿದ್ದಾರೆ.

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅವರು ಕಾಪು ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯುವ ಸಾಧ್ಯತೆ ಇದೆ. ಈ ಹಿಂದೆ ಅವರು ತಮಗೆ ಜನಪ್ರಿಯತೆ ತಂದುಕೊಟ್ಟಿರುವ ಬಳ್ಳಾರಿಯ ಕೂಡ್ಲಿಗಿಯಲ್ಲಿ ಚುನಾವಣೆಗೆ ನಿಲ್ಲಲು ಬಯಸಿದ್ದರು. ಆದರೆ ಅದು ಮೀಸಲು ಕ್ಷೇತ್ರವಾದ ಕಾರಣ ತಮ್ಮ ನಿಲುವನ್ನು ಬದಲಿಸಿದ್ದಾರೆ.

ಕಾಪು ಬಗ್ಗೆ ತನಗೆ ಸಾಕಷ್ಟು ತಿಳಿದಿದ್ದು, ಹೀಗಾಗೀ ಇಲ್ಲಿಂದಲೇ ಸ್ಪರ್ಧಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಈಗಾಗಲೇ ಅವರು ಅಲ್ಲಿ ಮನೆ ಮನೆ ಪ್ರಚಾರ ಆರಂಭಿಸಿದ್ದಾರೆ.

Leave a comment.

Your email address will not be published. Required fields are marked*