Admin Dec 7, 2017

ವಾಷಿಂಗ್ಟನ್: ತೀವ್ರ ವಿರೋಧವನ್ನೂ ಲೆಕ್ಕಿಸದೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜೆರುಸಲೇಂನ್ನು ಇಸ್ರೇಲ್‌ನ ರಾಜಧಾನಿ ಎಂದು ಘೋಷಿಸಿದ್ದಾರೆ.

ಅನಾದಿ ಕಾಲದಿಂದಲೂ ಜೆರುಸಲೇಂ ಯಹೂದಿಗಳ ರಾಜಧಾನಿಯಾಗಿದೆ, ಈಗಲೂ ಕೇಂದ್ರ ಕಛೇರಿ, ಸುಪ್ರೀಂಕೋರ್ಟ್, ಸಚಿವಾಲಯಗಳು ಅಲ್ಲಿವೆ. ಇದನ್ನೆಲ್ಲಾ ಪರಿಗಣಿಸಿಯೇ ಜೆರುಸಲೇಂಗೆ ಇಸ್ರೇಲ್ ರಾಜಧಾನಿಯ ಮಾನ್ಯತೆ ನೀಡಲಾಗಿದೆ ಎಂದು ವೈಟ್‌ಹೌಸ್ ತಿಳಿಸಿದೆ.

ಇದರಂತೆ ಶೀಘ್ರದಲ್ಲೇ ಅಮೆರಿಕಾ ಟೆಲ್‌ಅವಿವ್‌ನಲ್ಲಿರುವ ತನ್ನ ರಾಯಭಾರ ಕಛೇರಿಯನ್ನು ಜೆರುಸಲೇಂಗೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ.

ಇನ್ನೊಂದೆಡೆ ಅಮೆರಿಕಾ ನಿರ್ಧಾರದಿಂದ ವಿಶ್ವದ ವಿವಿಧ ಕಡೆ ಹಿಂಸಾಚಾರ ಭುಗಿಲೇಳುವ ಆತಂಕ ಉದ್ಭವವಾಗಿದೆ. ಜಿಹಾದಿ ಸಂಘಟನೆಗಳು ರಕ್ತಪಾತ ನಡೆಸುವ ಎಚ್ಚರಿಕೆ ನೀಡಿರುವುದರಿಂದ ಭಾರತದ ಇಸ್ರೇಲ್ ರಾಯಭಾರ ಕಛೇರಿ, ಇಸ್ರೇಲಿ ಪ್ರವಾಸಿಗರಿರುವ ತಾಣಗಳಿಗೆ ಹೆಚ್ಚು ಭದ್ರತೆ ನೀಡುವಂತೆ ಗುಪ್ತಚರ ಇಲಾಖೆ ಸೂಚಿಸಿದೆ.

 

Leave a comment.

Your email address will not be published. Required fields are marked*