Admin Dec 7, 2017

ಮಂಗಳೂರು: ಇಂಡಿಯನ್ ಕೋಸ್ಟ್ ಗಾರ್ಡ್ ಶಿಪ್ (ಐಸಿಜಿಎಸ್) ಅಮರ್ತ್ಯ ಡಿಸೆಂಬರ್ 6ರಂದು ಮಲ್ಪೆ ಬೀಚ್‌ನಿಂದ ೧೮ ಕಿಲೋಮೀಟರ್ ದೂರದಲ್ಲಿ ಸಿಲುಕಿ ಹಾಕಿಕೊಂಡಿದ್ದ ಬರಾಕುಡ ಎಂಬ ಹೆಸರಿನ ಮೀನುಗಾರಿಕಾ ದೋಣಿ ಮತ್ತು ಅದರಲ್ಲಿದ್ದ 13 ಮಂದಿ ಮೀನುಗಾರರನ್ನು ರಕ್ಷಿಸಿದೆ.

ಈ ದೋಣಿ ನ.7ರಂದು ಕೊಚ್ಚಿಯಿಂದ ಆಳ ಸಮುದ್ರ ಮೀನುಗಾರಿಕೆಗಾಗಿ ಹೊರಟಿತ್ತು, ಇದರಲ್ಲಿ ತಮಿಳುನಾಡು, ಕೇರಳ ಮತ್ತು ಅಸ್ಸಾಂಗೆ ಸೇರಿದ ಸಿಬ್ಬಂದಿಗಳಿದ್ದರು. ಆದರೆ ಓಖಿ ಚಂಡಮಾರುತದ ಪರಿಣಾಮವಾಗಿ ದೋಣಿ ಕೆಟ್ಟು ಸಮುದ್ರದಲ್ಲಿ ಸಿಲುಕಿ ಹಾಕಿಕೊಂಡಿದ್ದರು. ದೋಣಿ ನೀರು ತುಂಬಿ ಮುಳುಗಡೆಯಾಗುವ ಹಂತಕ್ಕೆ ತಲುಪಿತ್ತು.

ಈ ದೋಣಿ ಮುಳುಗಡೆ ಹೊಂದುತ್ತಿದೆ ಎಂಬ ಬಗ್ಗೆ ಮಲಪುರಂನ ಮೀನುಗಾರಿಕಾ ಉಪ ನಿರ್ದೇಶಕರು ಕರ್ನಾಟಕ ಕರಾವಳಿ ರಕ್ಷಣಾ ಪಡೆಗೆ ಮಾಹಿತಿ ರವಾನಿಸಿದ್ದರು. ತಕ್ಷಣ ಅಮರ್ತ್ಯ ಹಡಿಗಿನ ಮೂಲಕ ಕಾರ್ಯಾಚರಣೆಗಿಳಿದ ರಕ್ಷಣಾ ಪಡೆ ಸಿಬ್ಬಂದಿ ೧೩ ಮಂದಿಯ ಜೀವ ರಕ್ಷಿಸಿದರು.

Leave a comment.

Your email address will not be published. Required fields are marked*