Admin Dec 7, 2017

ನವದೆಹಲಿ: ನಮ್ಮ ಹೆಮ್ಮೆಯ ಸೈನಿಕರ ತ್ಯಾಗ, ಶೌರ್ಯದ ಗೌರವಾರ್ಥ ಇಂದು ದೇಶದಲ್ಲಿ ಶಸ್ತ್ರಾಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸಲಾಗುತ್ತಿದೆ. ಈ ಅಪೂರ್ವ ದಿನದಂದು ದೇಶದ ಪ್ರತಿಯೊಬ್ಬ ನಾಗರಿಕನು ಸೇನೆಗೆ ತನ್ನಿಂದ ಸಾಧ್ಯವಾದಷ್ಟು ಕೊಡುಗೆಯನ್ನು ನೀಡಬಹುದಾಗಿದೆ.

1949ರಿಂದ ಪ್ರತಿ ವರ್ಷ ಡಿ.7ರಂದು ಶಸ್ತ್ರಾಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸಲಾಗುತ್ತದೆ. ಡಿ.1ರಿಂದ ಡಿ.7ರವರೆಗೆ ಶಸ್ತ್ರಾಸ್ತ್ರ ಪಡೆಗಳ ವಾರ ಎಂದು ಆಚರಿಸಲಾಗುತ್ತದೆ. ಯೋಧರ ಗೌರವಾರ್ಥ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಈ ಸಂದರ್ಭ ಯೋಧರಿಗೆ, ಸಂತ್ರಸ್ಥ ಯೋಧರ ಪುನರ್ವಸತಿಗೆ, ಹುತಾತ್ಮ ಯೋಧರ ಕುಟುಂಬಗಳಿಗೆ ನಾಗರಿಕರು ತಮ್ಮಿಂದಾದ ಧನ ಸಹಾಯವನ್ನು ಮಾಡಬಹುದಾಗಿದೆ.

ಪಕ್ಷಾತೀತವಾಗಿ ಎಲ್ಲಾ ರಾಜಕಾರಣಿಗಳು, ಗಣ್ಯರು ಭಾರತೀಯ ಸೇನೆಯ ಪರಾಕ್ರಮವನ್ನು ಸ್ಮರಿಸಿದ್ದು, ಯೋಧರ ಕಲ್ಯಾಣಕ್ಕಾಗಿ ಸಹಾಯ ಹಸ್ತ ಚಾಚುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಸ್ವತಃ ತಾವೂ ಧನ ಸಹಾಯ ಮಾಡಿದ್ದಾರೆ.

Leave a comment.

Your email address will not be published. Required fields are marked*