Admin Dec 7, 2017

ಭಟ್ಕಳ: ಹೊನ್ನಾವರ ವಿಧಾನ ಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಶಾಸಕ ಮಂಕಾಳ ವೈದ್ಯರು ಓರ್ವ ಸಭ್ಯ ರಾಜಕಾರಣಿಯಾಗಿದ್ದು, ಕಡಿಮೆ ಮಾತನಾಡಿ ಹೆಚ್ಚು ಕ್ಷೇತ್ರದ ಅಭಿವೃದ್ಧಿಯ ಕೆಲಸವನ್ನು ಹಠದಿಂಡ ಮಾಡುವ ಜನಪ್ರತಿನಿಧಿಯಾಗಿದ್ದಾರೆ. ಪಕ್ಷೇತರರಾಗಿ ಚುನಾವಣೆಯಲ್ಲಿ ಭಾರಿ ಗೆಲುವಿನಿಂದ ಜಯಶಾಲಿಯಾಗಿ ನಮ್ಮ ಪಕ್ಷದ ಬೆಂಬಲಕ್ಕೆ ಬಂದ ಅವರು ಇತ್ತೀಚಿಗೆ ಕಾಂಗ್ರೆಸ್​ನವರಾಗಿದ್ದು, ಮುಂದಿನ ಚುನಾವಣೆಯಲ್ಲಿ ಇವರೇ ಈ ಕ್ಷೇತ್ರದಿಂದ ಗೆಲ್ಲುವಂತೆ ತಾಲೂಕಿನ ಜನರು ಮಾಡುತ್ತಾರೆನ್ನುವುದರ ಮೂಲಕ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ.

 

ಬೆಂಗಳೂರಿಗೆ ಬಂದು ಕಾಲಹರಣ ಮಾಡಿ ಕ್ಷೇತ್ರದ ಜನರನ್ನು ಜನರಿಗಾಗಬೇಕಾದ ಕೆಲಸವನ್ನು ಮರೆಯುವ ಜನಪ್ರತಿನಿಧಿಗಳ ನಡುವೆ ಶಾಸಕ ಮಂಕಾಳ ಓರ್ವ ಉತ್ತಮ ಶಾಸಕರು ಎನ್ನುವುದು ಇವತ್ತಿನ ಕಾರ್ಯಕ್ರಮದಿಂದ ಜನರ ಬೆಂಬಲದಿಂದ ತಿಳಿದು ಬಂದಿದೆ ಎಂದ ಅವರು ನಮ್ಮ ಪಕ್ಷಕ್ಕೆ ಕೆಲಸ ಮಾಡುವವರು ಬೇಕು ಹೊರತು ಬಿಜೆಪಿಯಲ್ಲಿನ ನಾಯಕರ ತರಹ ಬೇಕಾಬಿಟ್ಟಿ ಭಾಷಣ ಮಾಡುವವರು ಬೇಡ. ನಮ್ಮದು ನುಡಿದಂತೆ ನಡೆಯುವ ರಾಜ್ಯ ಸರಕಾರವಾಗಿದೆ. ಬಿಜೆಪಿಯ ಎಲ್ಲಾ ಮಹಾನ್ ನಾಯಕರು ಜೈಲಿಗೆ ಹೋದವರಾಗಿದ್ದು, ಅವರಿಂದ ಹೇಳಿಸಿಕೊಳ್ಳುವ ಅನಿವಾರ್ಯತೆ ನನಗಿಲ್ಲ. ಭ್ರಷ್ಟಾಚಾರ ಇಲ್ಲದ ಸರಕಾರ, ಹಗರಣ ಇಲ್ಲದ ಸರಕಾರವನ್ನು ನಾವು ನಡೆಸಿಕೊಂಡು ಬಂದಿದ್ದೇವೆ ಎಂದ ಅವರು ಕೋಮುದಾದಿ ಪಕ್ಷದವರಾದ ಬಿಜೆಪಿಗೆ ಸಂವಿಧಾನ ಅಥವಾ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲವಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಲೋಕೋಪಯೋಗಿ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಬೃಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ, ಶಾಸಕ ಮಂಕಾಳ ವೈದ್ಯ ಮಾತನಾಡಿದರು.


ಸಮಾರಂಭದಲ್ಲಿ ವಿವಿಧ ಯೋಜನೆಯ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಕ್ಕು ಪತ್ರ ವಿತರಣೆಯನ್ನು ಮಾಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕ್ಷೇತ್ರದ ಜನರ ವತಿಯಿಂದ ಶಾಸಕ ಮಂಕಾಳ ವೈದ್ಯ ಪೇಟ, ಶಾಲು ಹಾಕಿ ಗೀತೋಪದೇಶ ಸಾರುವ ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.


ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ, ಕರ್ನಾಟಕ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೇಂದ್ರ ನಾಯ್ಕ, ತಾ.ಪಂ. ಅಧ್ಯಕ್ಷ ಈಶ್ವರ ನಾಯ್ಕ, ಜಿ.ಪಂ. ಸದಸ್ಯ ಅಲ್ಬರ್ಟ ಡೀಕೋಸ್ತಾ, ಸಿಂಧು ಭಾಸ್ಕರ ನಾಯ್ಕ, ಪುರಸಭೆ ಅಧ್ಯಕ್ಷ ಮಹ್ಮದ್ ಸಾದಿಕ್ ಮಟ್ಟಾ, ಪಟ್ಟಣ ಪಂ.ಅಧ್ಯಕ್ಷ ಅಬ್ದುಲ್ ರಹೀಂ, ಹೊನ್ನಾವರ ಕಾಂಗ್ರೆಸ್ ಮುಖಂಡ ಶಿವಾನಂದ ಹೆಗಡೆ, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ವಿನಾಯಕ ಪಾಟೀಲ್, ತಾಲೂಕು ಆಡಳಿತ ಅಧಿಕಾರಿಗಳು ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Leave a comment.

Your email address will not be published. Required fields are marked*