Admin Dec 7, 2017

ಮುಂಬಯಿ : ಹಳದಿ ಕುಂಕುಮ ಕಾರ್ಯಕ್ರಮವನ್ನು ಮುಂಬೈಯ ಎಲ್ಲಾ ಸಮಾಜದವರು ಸಂಭ್ರಮದಿಂದ ವರ್ಷ ವರ್ಷವೂ ಆಚರಿಸುತ್ತಾರೆ. ಹಳದಿ ಕುಂಕುಮವು ಸಂಸ್ಕ್ರತಿಯ ಪ್ರತೀಕವಾಗಿದ್ದು, ಇದನ್ನು ಸಾಮೂಹಿಕವಾಗಿ ಆಚರಿಸುವುದರಿಂದ ಮಹಿಳೆಯರಲ್ಲಿ ಒಗ್ಗಟ್ಟು ಮೂಡುತ್ತದೆ ಎಂದು ಬಂಟರ ಸಂಘ ಮುಂಬೈ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ ಹೇಳಿದರು.


ಅವರು ಮುಲುಂಡ್ ಚೆಕ್ ನಾಕಾ ಸಮೀಪದ ವುಡ್‌ಲ್ಯಾಂಡ್ ರಿಟ್ರೀಟ್ ಸಭಾಗ್ರಹದಲ್ಲಿ ನಡೆದ ಥಾಣೆ ಬಂಟ್ಸ್ ಅಸೋಸಿಯೇಶನ್ ಇದರ ಮಹಿಳಾ ವಿಭಾಗದ ಆರ್ಶರಯದಲ್ಲಿ ಜರಗಿದ ಹಳದಿ ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಮಾಜಿ ಜಿಲ್ಲಾ ಲಯನೆಸ್ ಸಂಯೋಜಕಿ ವಿಜಯ ಲಕ್ಷ್ಮೀ ಪ್ರಸಾದ್ ರೈ ಗೌರವ ಅತಿಥಿಯಾಗಿ ಸಂದೇಶವನ್ನು ನೀಡಿದರು.


ಥಾಣೆ ಬಂಟ್ಸ್ ಸಂಘವು ಒಗ್ಗಟ್ಟಿನ ಪ್ರತೀಕವಾಗಿ, ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಬೆರೆತು, ಪರಸ್ಪರ ಪ್ರೀತಿಯಿಂದ ಒಟ್ಟುಗೂಡುವ ಉದ್ದೇಶದಿಂದ ಹಲವಾರು ಕಾಯಕ್ರಮಗಳನ್ನು ಆಯೋಜಿಸುತ್ತಿದೆ. ಇದರಿಂದ ಸಂಸ್ಕಾರಯುತವಾದ ಒಳ್ಳೆಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದದ ಥಾಣೆ ಬಂಟ್ಸ್ ಸಂಘದ ಅಧ್ಯಕ್ಷ ಕುಶಾಲ್ ಸಿ. ಭಂಡಾರಿಯವರು ಹೇಳಿದರು.


ಥಾಣೆ ಬಂಟ್ಸ್‌ನ ಹಿರಿಯ ಸದಸ್ಯೆಯರಾದ ಸುಚೇತ ರವೀಂದ್ರ ಶೆಟ್ಟಿ ಹಾಗೂ ಶಾಂಭವಿ ಶಿವಣ್ಣ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ನವ ವಿವಾಹಿತೆಯರಾದ ಪ್ರಿಯಾಂಕ ಮಹೇಶ್ ಶೆಟ್ಟಿ, ಅಮಿತಾ ರಂಜನ್ ಶೆಟ್ಟಿ, ದಿವ್ಯಾ ನಿತಿನ್ ಶೆಟ್ಟಿ, ಜಯಶ್ರೀ ಸಾಯಿನಾಥ್ ಶೆಟ್ಟಿ ಮೊದಲಾದವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದು ಸ್ಪರ್ಧೆಗಳಲ್ಲಿ ಇಂದಿರಾ ಎನ್. ಶೆಟ್ಟಿ, ರಾಜೀವಿ ಕೆ. ಶೆಟ್ಟಿ, ಶಾಂತಾ ಎನ್. ಶೆಟ್ಟಿ, ಉಷಾ ಬಿ. ಶೆಟ್ಟಿ, ನಯನಾ ಶೆಟ್ಟಿ, ಶಾರದಾ ಎಸ್. ಶೆಟ್ಟಿ ಮೊದಲಾದವರು ಬಹುಮಾನಗಳನ್ನು ಪಡೆದರು.


ಜ್ಯೋತಿ ನಾರಾಯಣ ಶೆಟ್ಟಿ ಪ್ರಾರ್ಥಿಸಿದರು. ಸುಮತಿ ಕರುಣಾಕರ ಶೆಟ್ಟಿ ಸ್ವಾಗತಿಸಿದರು, ಶರ್ಮಿಳಾ ಎಸ್ ಶೆಟ್ಟಿ, ಮೋಹಿನಿ ಆರ್ ಶೆಟ್ಟಿ, ತಾರಾ ಪ್ರಕಾಶ್ ಶೆಟ್ಟಿ ಪರಿಚಯಿಸಿದರು. ಕುಶಲ ಎನ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಅನ್ನದಾನ ನಡೆಯಿತು.

 

Leave a comment.

Your email address will not be published. Required fields are marked*