Admin Dec 7, 2017

ಮಂಗಳೂರು : ಕಾರ್ಕಳದ ಇನ್ನಾ ಗ್ರಾಮದ ಆಯುರ್ವೇದ ಭೂಷಣ ಎಂ.ವಿ. ಶಾಸ್ತ್ರಿ ಪ್ರೌಢಶಾಲೆಯಲ್ಲಿ ಹಿರಿಯ ಸಾಹಿತಿ, ಮುಂಬೈನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಇನ್ನಕಾಚೂರು ಪಡುಮನೆ ಸೀತಾರಾಮ ಶೆಟ್ಟಿ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಇತ್ತೀಚೆಗೆ ಜರಗಿತು.
ಬಡಗಬೆಟ್ಟು ದೈವಸ್ಥಾನದ ಧರ್ಮದರ್ಶಿ ಅರುಣಾಚಲ ಹೆಗ್ಡೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಅಧ್ಯಕ್ಷತೆ ವಹಿಸಿದ್ದರು.


ಈ ಸಂದರ್ಭದಲ್ಲಿ ಪ್ರಾ. ಸೀತಾರಾಮ ಶೆಟ್ಟಿ ಸಂಸ್ಮರಣಾ ಪ್ರಶಸ್ತಿಯನ್ನು ಪಲಿಮಾರಿನ ಎಲ್.ಆರ್.ಪಿ. ಈ ಮತ್ತು ಸಿ ಟ್ರಸ್ಟ್‌ನ ಸ್ಥಾಪಕ ರಾಮದಾಸ ಪ್ರಭು ಅವರಿಗೆ ನೀಡಲಾಯಿತು.

ಸಾಹಿತಿ, ನಾಟಕಕಾರ ಸಾ. ದಯಾ ಸಂಸ್ಮರಣಾ ಭಾಷಣ ಮಾಡಿದರು. ಕಾಚೂರು ನಡುಮನೆ ಶೇಖರ್ ಆರ್ ಶೆಟ್ಟಿ ಮತ್ತು ಇನ್ನ ಬೀಡು ಮನೆ ಬಿ. ರವೀಂದ್ರ ಶೆಟ್ಟಿ ಆಶಯ ಭಾಷಣ ಮಾಡಿದರು. ಅವಿಭಜಿತನ ಕಾರ್ಕಳ ತಾಲೂಕು ಮಟ್ಟದಲ್ಲಿ ಏರ್ಪಡಿಸಲಾಗಿದ್ದ ಪ್ರತಿಭಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ಮತ್ತು ಪರ್ಯಾಯ ಫಲಕಗಳನ್ನು ವಿತರಿಸಲಾಯಿತು.

ಶಾಲೆ ಸಂಚಾಲಕ ಸತೀಶ ಸದಾನಂದ ಅಭಿನಂದನಾ ಭಾಷಣ ಮಾಡಿದರು. ಶಾಲಾ ಮುಖ್ಯೋಪಾಧ್ಯಾಯ ಪ್ರಕಾಶ್ ರಾವ್ ಪಿ. ಎನ್. ಸ್ವಾಗತಿಸಿದರು. ಅಧ್ಯಾಪಕ ಸುಧಾಕರ ಆಚಾರ್ಯ ಮಾನಪತ್ರ ವಾಚಿಸಿದರು. ರಮಾನಾಥ ರೈ ಮತ್ತು ಪೊನ್ನುತ್ತು ರೈ ವಿಜೇತರ ಪಟ್ಟಿ ಘೋಷಿಸಿದರು. ರಾಜೇಂದ್ರ ಕೆ. ನಿರೂಪಿಸಿದರು.

Leave a comment.

Your email address will not be published. Required fields are marked*