Admin Dec 6, 2017

ಮಂಗಳೂರು: ‘ಒಂದು ಮೊಟ್ಟೆಯ ಕಥೆ’ ಸಿನಿಮಾದ ಮೂಲಕ ಕರ್ನಾಟಕದಲ್ಲಿ ಪ್ರಸಿದ್ಧಿಗೆ ಬಂದಿರುವ ನಟ ರಾಜ್ ಬಿ ಶೆಟ್ಟಿಯವರು ಮಣಿಪಾಲ್ ಸ್ಕೂಲ್ ಆಫ್ ಕಮ್ಯೂನಿಕೇಶನ್‌ನ ಪದವೀಧರರು ಮತ್ತು ವೃತ್ತಿಪರರು ನಿರ್ಮಿಸುತ್ತಿರುವ ಹೊಸ ಸಿನಿಮಾದ ಲೀಡ್ ರೋಲ್‌ನಲ್ಲಿ ಅಭಿನಯಿಸುತ್ತಿದ್ದಾರೆ.

‘ಫಿಕ್ಷನ್’ ಎಂಬ ಹೆಸರಿನ ಸಿನಿಮಾ ಇದಾಗಿದ್ದು, ಇದರಲ್ಲಿ ನಾಸೀರ್ ಅಲಿಯಾಸ್ ಗಾಂಧಿ ಎಂಬ ಪಾತ್ರವನ್ನು ಅವರು ನಿಭಾಯಿಸುತ್ತಿದ್ದಾರೆ.

ಮಣಿಪಾಲ ವಿದ್ಯಾರ್ಥಿಗಳ ಚಿತ್ರ ನಿರ್ಮಾಣ ಸಂಸ್ಥೆ ಚಿಕನ್ ಸಾಂಬಾರ್ ಪ್ರೊಡಕ್ಷನ್ಸ್ ಡಿ.3ರಂದು ಈ ಸಿನಿಮಾದ ಪ್ರೋಮೋವನ್ನು ಬಿಡುಗಡೆಗೊಳಿಸಿತ್ತು. ಸದ್ಯ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.

ಈ ಸಿನಿಮಾ ಭಾರತದ ಇತಿಹಾಸ ಅಥವಾ ರಾಜಕೀಯಕ್ಕೆ ಸಂಬಂಧಿಸಿದಲ್ಲ ಎಂದು ಈಗಾಗಲೇ ಚಿತ್ರ ತಂಡ ಸ್ಪಷ್ಟಪಡಿಸಿದೆ.

 

Leave a comment.

Your email address will not be published. Required fields are marked*