Admin Dec 4, 2017

ನವದೆಹಲಿ: ಬಿಹಾರ ಬಿಜೆಪಿ ಮುಖ್ಯಸ್ಥ, ಸಚಿವ ಸುಶೀಲ್ ಕುಮಾರ್ ಮೋದಿಯವರು ತಮ್ಮ ಪುತ್ರನ ವಿವಾಹ ಸಮಾರಂಭದಲ್ಲಿ ಅಂಗಾಂಗ ದಾನ ಮಾಡಲು ಹೆಸರು ನಮೋದಿಸುವ ಸ್ಟಾಲ್‌ವೊಂದನ್ನು ತೆರೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

2016ರಿಂದ ಸುಶೀಲ್ ಮೋದಿಯವರು ’ಅಂಗಾಂಗ ದಾನ’ ಅಭಿಯಾನದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಪುತ್ರನ ಮದುವೆಯಲ್ಲೂ ಈ ಅಭಿಯಾನವನ್ನು ಅವರು ಮುಂದುವರೆಸಿದ್ದಾರೆ.

’ದಾಧಿಚಿ ದೇಹ್ ದಾನ್ ಸಮಿತಿ’ಯವರು ಮೋದಿಯವರ ಪುತ್ರ ಉತ್ಕರ್ಷ್ ಮೋದಿಯವರ ವಿವಾಹದಲ್ಲಿ ಅಂಗಾಂಗ ದಾನದ ಸ್ಟಾಲ್ ಹಾಕಿದ್ದರು. ಇಲ್ಲಿ ಅತಿಥಿಗಳು ಅಂಗಾಂಗ ದಾನಕ್ಕೆ ಹೆಸರು ನಮೋದನೆ ಮಾಡಿಕೊಂಡರು.

ಅಲ್ಲದೇ ಬಂದ ಅತಿಥಿಗಳೆಲ್ಲರಿಗೂ ಅಂಗಾಂಗ ದಾನದ ಮಹತ್ವ ಸಾರುವ ಕಾಗದ ಪತ್ರಗಳನ್ನು ಹಂಚಿಕೆ ಮಾಡಲಾಯಿತು.

 

Leave a comment.

Your email address will not be published. Required fields are marked*