Admin Dec 4, 2017

ನವದೆಹಲಿ: ಜಿಎಸ್​ಟಿ ಜಾರಿಯಾದ ಬಳಿಕ ಮೊದಲ ಬಜೆಟ್ ಮಂಡಿಸಲು ಕೇಂದ್ರ ಹಣಕಾಸು ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಜನವರಿ 30 ರಿಂದ ಸಂಸತ್ ಅಧಿವೇಶನ ಆರಂಭವಾಗಲಿದ್ದು, ಫೆಬ್ರವರಿ 1 ರಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡಿಸಲಿದ್ದಾರೆ. ಇದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಈಗಾಗಲೇ ಮಾಡಿಕೊಂಡಿದ್ದಾರೆ. .
2018 -19 ನೇ ಸಾಲಿನ ಬಜೆಟ್ ಅರುಣ್ ಜೇಟ್ಲಿ ಅವರಿಗೆ 5 ನೇ ಬಜೆಟ್ ಆಗಿದೆ. ಇನ್ನು ಬಿ.ಜೆ.ಪಿ. ನೇತೃತ್ವದ ಎನ್.ಡಿ.ಎ. ಸರ್ಕಾರಕ್ಕೆ ಇದು ಕೊನೆಯ ಬಜೆಟ್ ಆಗಿರುವುದರಿಂದ ಸಾಕಷ್ಟು ಕುತೂಹಲ ಮೂಡಿದೆ. ನೇರ ತೆರಿಗೆ ಬದಲಾವಣೆ, ಹೊಸ ಯೋಜನೆ ಘೋಷಣೆ ಮಾಡುವ ಸಾಧ್ಯತೆ ಇದೆ.

Leave a comment.

Your email address will not be published. Required fields are marked*