Admin Dec 1, 2017

ಹ್ಯಾಟ್ರಿಕ್​ ಹೀರೋ ಶಿವರಾಜ್ ಕುಮಾರ್ ಹಾಗೂ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ಬಹುನಿರೀಕ್ಷಿತ ಮಫ್ತಿ ಚಿತ್ರ ರಾಜ್ಯಾದ್ಯಂತ ಇಂದು ತೆರೆಕಂಡಿದೆ. ರಾಜ್ಯದ 350ಕ್ಕೂ ಹೆಚ್ಚು ಸಿನಿಮಾ ಮಂದಿರದಲ್ಲಿ ಚಿತ್ರ ರಿಲೀಸ್ ಆಗಿದ್ದು, ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್​ ಸಿಕ್ಕಿದೆ.

ಇನ್ನು ಬೆಂಗಳೂರಿನ ಹಲವು ಚಿತ್ರಮಂದಿರದಲ್ಲಿ ಮುಂಜಾನೆ 5ಗಂಟೆಗೆ ಚಿತ್ರ ಪ್ರದರ್ಶನ ಪ್ರಾರಂಭವಾಗಿದ್ದು ಮಫ್ತಿ ಚಿತ್ರ ನೋಡಿದ ಪ್ರೇಕ್ಷಕರು ಫುಲ್​ ಖುಷ್​ ಆಗಿದ್ದಾರೆ.
ಒಂದು ವರ್ಷದ ಬಳಿಕ ಶ್ರೀ ಮುರಳಿ ಅಭಿನಯದ ಸಿನಿಮಾ ತೆರೆಗೆ ಬಂದಿದ್ದು, ಮುರಳಿಗೆ ಈ ಚಿತ್ರ ಪ್ಲಸ್​ ಪಾಯಿಂಟ್​ ಆಗಲಿದೆ. ಮಫ್ತಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಶ್ರೀ ಮುರಳಿ ತೆರೆ ಮೇಲೆ ಮಿಂಚಿದ್ದಾರೆ. ಭೈರತಿ ರಣಗಲ್ ಪಾತ್ರದಲ್ಲಿ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದು, ಶಿವಣ್ಣ ಎಂಟ್ರಿಗೆ ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಇನ್ನು ಈ ಚಿತ್ರದ ನಾಯಕಿ ಪಾತ್ರದಲ್ಲಿ ಶಾನ್ವಿ ಶ್ರೀವಾತ್ಸವ್​​ ಅಭಿನಯಿಸಿದ್ದಾರೆ.


ನಿರ್ದೇಶಕ ನರ್ತನ್ ಅವರ ಚೊಚ್ಚಲ ಸಿನಿಮಾ ಇದಾಗಿದ್ದು, ಬಿಗ್​ ಹಿಟ್​ ಆಗುವ ಎಲ್ಲಾ ಸೂಚನೆ ಗೋಚರಿಸುತ್ತಿದೆ.

Leave a comment.

Your email address will not be published. Required fields are marked*