Admin Nov 30, 2017

ನವದೆಹಲಿ: ಬಾಲಿವುಡ್ ನಟಿ ದಿಯಾ ಮಿರ್ಜಾ ಅವರು ವಿಶ್ವಸಂಸ್ಥೆ ಪರಿಸರದ ಭಾರತ ಗುಡ್‌ವಿಲ್ ಅಂಬಾಸಿಡರ್ ಆಗಿ ನೇಮಕವಾಗಿದ್ದಾರೆ. ಪರಿಸರ ಸಂರಕ್ಷಣೆಗೆ ಅವರು ನೀಡುತ್ತಿರುವ ಕೊಡುಗೆಗಳನ್ನು ಗಮನಿಸಿ ವಿಶ್ವಸಂಸ್ಥೆ ಅವರಿಗೆ ಈ ಗೌರವ ನೀಡಿದೆ.

ಗುಡ್‌ವಿಲ್ ಅಂಬಾಸಿಡರ್ ಆಗಿ ಅವರು ಶೂದ್ಧ ಗಾಳಿ, ಶುದ್ಧ ಸಮುದ್ರ, ವನ್ಯಜೀವಿ ಸಂರಕ್ಷಣೆ, ಹವಮಾನ ವೈಪರೀತ್ಯದ ಬಗ್ಗೆ ವಿಶ್ವಸಂಸ್ಥೆ ಜೊತೆಗೂಡಿ ಜಾಗೃತಿ ಮೂಡಿಸಲಿದ್ದಾರೆ.

ವಿಶ್ವಸಂಸ್ಥೆಯ ನಿರ್ಧಾರ ಗೌರವ ತಂದಿದೆ. ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗಾಗಿ ವಿಶ್ವಸಂಸ್ಥೆ ಜೊತೆಗೂಡಿ ಕಾರ್ಯನಿರ್ವಹಿಸುತ್ತೇನೆ ಎಂದು ದಿಯಾ ಹೇಳಿದ್ದಾರೆ.

Leave a comment.

Your email address will not be published. Required fields are marked*