Admin Nov 30, 2017

ನವದೆಹಲಿ: ಕ್ಸಿಯೋಮಿ ಸಂಸ್ಥೆ ‘ದೇಶ್ ಕಾ ಸ್ಮಾರ್ಟ್‌ಫೋನ್’ ಎಂದು ಬಿಂಬಿಸಿರುವ ತನ್ನ ಬಹು ನಿರೀಕ್ಷೆಯ ರೆಡ್ ಮೀ 5A ಸ್ಮಾರ್ಟ್‌ಫೋನ್‌ನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಮೊದಲ 5 ಮಿಲಿಯನ್ ಬಳಕೆದಾರರಿಗೆ ಈ ಫೋನ್ ರೂ.4,999ಗೆ ಸಿಗಲಿದೆ.

ಈ ಸ್ಮಾರ್ಟ್‌ಫೋನ್‌ನ ವಿಶೇಷತೆಯೆಂದರೆ ಇದು 3,000 ಎಂಎಎಚ್ ಬ್ಯಾಟರಿ ಹೊಂದಿದೆ. ಅಂದರೆ 8 ದಿನಗಳ ಬ್ಯಾಟರಿ ಲೈಫ್ ಸಾಮರ್ಥ್ಯ ಹೊಂದಿದೆ. ಆಂಡ್ರಾಯ್ಡ್ 7.1 ವರ್ಶನ್ ಆಗಿದ್ದು, ಡಿಸ್‌ಪ್ಲೇ 5 ಇಂಚು ಇದೆ. ಕ್ಯಾಮೆರಾ 13 ಎಂಪಿ ಮತ್ತು ಸೆಲ್ಫಿ ಕ್ಯಾಮೆರಾ 5ಎಂಪಿ ಇದೆ.

2ಜಿಬಿ ಮತ್ತು 3ಜಿಬಿ ರ‍್ಯಾಮ್‌ನಲ್ಲಿ ಇದು ಲಭ್ಯವಿದೆ. 16/32 ಜಿಬಿ ROM ಹೊಂದಿದೆ. 2ಜಿಬಿ/16 ಜಿಬಿ ಫೋನ್ ರೂ.4,999 ಮತ್ತು 3ಜಿಬಿ/32 ಜಿಬಿಗೆ ರೂ.6,999ಗೆ ದೊರಯಲಿದೆ.

Leave a comment.

Your email address will not be published. Required fields are marked*